ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕೃತಿ ಬಿಡುಗಡೆ, ಯಕ್ಷಗಾನ ಪ್ರದರ್ಶನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಡಿಸೆ೦ಬರ್ 4 , 2013
ಡಿಸೆ೦ಬರ್ 4, 2013

ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕೃತಿ ಬಿಡುಗಡೆ, ಯಕ್ಷಗಾನ ಪ್ರದರ್ಶನ

ಮುಂಬಯಿ : ಯಕ್ಷಗಾನ ಪ್ರಸಂಗಕರ್ತರಿಗೆ ಪೌರಾಣಿಕ, ಐತಿಹಾಸಿಕ ಹಾಗೂ ಜಾನಪದ ಕತೆಗಳ ಆಳವಾದ ಅಧ್ಯಯನಬೇಕು. ಅದನ್ನು ಪ್ರದರ್ಶನಕ್ಕೆ ಅನುಗುಣವಾಗಿ ಪ್ರಸಂಗವನ್ನು ರಚಿಸಿ ಪ್ರೇಕ್ಷಕರನ್ನು ಆಕರ್ಷಿಸುವ ವಿಶೇಷತೆ ಯಕ್ಷಗಾನ ಸಾಹಿತಿಯಲ್ಲಿರಬೇಕು. ತಾಳಬದ್ಧವಾಗಿ, ಛಂದಸ್ಸುಮುಕ್ತವಾಗಿರುವ ಯಕ್ಷಗಾನ ಅನೇಕ ಕಲೆಗಳನ್ನು ಸಮಾವೇಶಗೊಂಡ ಕಲಾಸಂಗಮವಾಗಿದೆ ಎಂದು ನಗರದ ಹಿರಿಯ ಸಾಹಿತಿ ಬಿ. ಎಸ್‌. ಕುರ್ಕಾಲ್‌ ಅವರು ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಸಿದ್ಧ ವೈದ್ಯ ಎಂ. ಎಸ್‌. ಆಳ್ವ ಅವರು ಯಕ್ಷಗಾನ ಪ್ರಸಂಗವನ್ನು ಬಿಡುಗಡೆಗೊಳಿಸಿದರು.
ಡಿ. 1 ರಂದು ಫಲಿಮಾರು ಮಠ ಮೀರಾರೋಡ್‌ ಶಾಖೆಯಲ್ಲಿ ಯಕ್ಷಗಾನ ಪ್ರಸಂಗಕರ್ತ ಎಂ. ಟಿ. ಪೂಜಾರಿ ಅವರ ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯಕ್ಷಗಾನ ರಂಗಕ್ಕೆ ಸಾರ್ಥಕ ಸೇವೆ ಸಲ್ಲಿಸಿದ ಎಂ. ಟಿ. ಪೂಜಾರಿ ಅವರು ಒಟ್ಟು 24 ತುಳು-ಕನ್ನಡ ಪ್ರಸಂಗವನ್ನು ರಚಿಸಿ ಮುಂಬಯಿ ನಗರದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಅವರ ಪ್ರಕಟಗೊಳ್ಳದ ಕೃತಿಗಳನ್ನು ಮುದ್ರಣಗೊಳ್ಳುವಂತೆ ಕಲಾಪ್ರಿಯ, ಕಲಾಪೋಷಕರು, ಸಂಘ-ಸಂಸ್ಥೆಗಳು ಕೈಜೋಡಿಸಬೇಕು. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಪ್ರಸಂಗಗಳು ಅನುಕರಣೀಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆಗೊಳಿಸಿದ ಪ್ರಸಿದ್ಧ ವೈದ್ಯ ಎಂ. ಎಸ್‌. ಆಳ್ವ ಅವರು ಮಾತನಾಡಿ, ಜಾತಿ, ಮತ, ಭೇದವಿಲ್ಲದೆ ಎಲ್ಲರಿಂದಲೂ ಮುಟ್ಟಿಸಿಕೊಳ್ಳುವ ದೇವರು ಪಂಢರಾಪುರದ ವಿಠಲನೊಬ್ಬನೆ. ಆಷಾಢ ಏಕಾದಶಿಯಂದು ಇಲ್ಲಿ ಸುಮಾರು 15 ರಿಂದ 20 ಲಕ್ಷ ಸೇರಿ ಭಗವಂತನನ್ನು ಭಜನೆಯ ಮೂಲಕ ಪೂಜಿಸುತ್ತಾರೆ. ಕರ್ನಾಟಕ ಲೇಖಕ ಮಹಾರಾಷ್ಟ್ರದ ಪವಿತ್ರ ಕ್ಷೇತ್ರದ ಬಗ್ಗೆ ಬರೆದು ಯಕ್ಷಗಾನ, ಬಯಲಾಟದ ಮೂಲಕ ಪ್ರದರ್ಶನಗೊಳಿಸುವುದು ನಿಜಕ್ಕೂ ಶ್ಲಾಘನೀಯ. ಅವರ ಪಂಢರಾಪುರ ಕ್ಷೇತ್ರ ಮಹಾತ್ಮೆ ಎಂಬ ಭಕ್ತಿ ಪ್ರಧಾನ ಪ್ರಸಂಗ ಸದಾ ಪ್ರದರ್ಶನಗೊಳ್ಳುತ್ತಿರಲಿ ಎಂದು ಶುಭ ಹಾರೈಸಿದರು.

ಫಲಿಮಾರು ಮಠದ ಪ್ರಧಾನ ಅರ್ಚಕ ವಿದ್ವಾನ್‌ ರಮಣ ಆಚಾರ್ಯ, ಸಂಘಟಕ ಜಿ. ಟಿ. ಆಚಾರ್ಯ, ಕರ್ನೂರು ಶಂಕರ ಆಳ್ವ, ಭಾಗವತ ಪೊಲ್ಯ ಲಕ್ಷಿ¾àನಾರಾಯಣ ಶೆಟ್ಟಿ, ಕೃತಿಕಾರ ಎಂ. ಟಿ. ಪೂಜಾರಿ ಅವರು ಸಂದಭೋìಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಲಾಪೋಷಕ ಸಂಜೀವ ಶೆಟ್ಟಿ ಅವರು ಉಪಸ್ಥಿತರಿದ್ದರು.

ಗುಣಕಾಂತ ಕರ್ಜೆ, ಚಿತ್ರಾಪು ಕೆ. ಎಂ. ಕೋಟ್ಯಾನ್‌, ದಿನೇಶ್‌ ಶೆಟ್ಟಿ, ಸದಾಶಿವ ವಾಲ್ಪಾಡಿ, ಜಯಕರ ಶೆಟ್ಟಿ ಅವರು ಗಣ್ಯರನ್ನು ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಂಗಕರ್ತ ಎಂ. ಟಿ. ಪೂಜಾರಿ ಅವರ ನೂತನ ಶ್ರೀ ಪಂಢರಾಪುರ ಕ್ಷೇತ್ರ ಮಹಾತ್ಮೆ ಯಕ್ಷಗಾನವು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಲಾವಿದರಿಂದ ಪ್ರದರ್ಶನಗೊಂಡಿತು. ಎರ್ಮಾಳ್‌ ಅರುಣ್‌ ಕುಮಾರ್‌ ಶೆಟ್ಟಿ ಅವರು ಕಾರ್ಯಯಕ್ರಮ ನಿರೂಪಿಸಿ ವಂದಿಸಿದರು.

ಕೃಪೆ : http://www.kannada.yahoo.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ